Wednesday, 22 February 2017

H Raju Kodihally Birthday Celebration in Siri soundarya and SR Hi-tech Vision Office





23ನೇ ವರ್ಷದ ಹುಟ್ಟು ಹಬ್ಬವನ್ನು ಸಿರಿ ಸೌಂದರ್ಯ ಮತ್ತು ಎಸ್ ಆರ್ ಕಛೇರಿಯಲ್ಲಿ ಆಚರಿಸಲಾಯಿತು. ಸಂತಸದ ವಿಷಯವೆಂದರೆ ಸಹೋದ್ಯೋಗಿಗಳು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು.
ವೈಭವೋಪಿತವಾಗಿ ಆಚರಿಸಿಕೊಂಡ ಪ್ರಥಮ ಹುಟ್ಟುಹಬ್ಬವಿದು, ನನ್ನ ಪಾಲಿಗೆ. ಸುಮಾರು ಐದಾರು ವರ್ಷಗಳ ಹಿಂದೆ ನನ್ನ ಗೆಳೆಯನೊಬ್ಬ ಈತರಹವೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದ. ಆಗ ನನಗೂ ಕೂಡ ಈ ರೀತಿ ಆಚರಿಸಿಕೊಳ್ಳುವ ಆಸೆ ಮೂಡಿತ್ತು.

ಆ ಸಂಭ್ರಮ ಸುರೇಶ್ ಚಿಕ್ಕಣ್ಣ ರವರ ಸಮ್ಮುಖದಲ್ಲಿ ಅದ್ಭುತ ವಾಗೆಯೇ ನಡೆಯಿತು. ನನ್ನ ಸಹೋದ್ಯೋಗಿಗಳಾದ ಸಂದೀಪ್, ಚಂದ್ರು, ಅನಿಲ್, ಗಣಿ, ಶರತ್, ಮತ್ತು ಪ್ರಮೋದ್. ಎಲ್ಲರೂ ಬಹಳಾ ಸೌಜನ್ಯಯುತವಾಗಿ ಆಚರಣೆಗೆ ಮೂಲ ಕಾರಣವಾದರು. ಎಲ್ಲರಿಗೂ ಧನ್ಯವಾದಗಳು.



















Friday, 10 February 2017

H Raju Kodihally


'ಮುತ್ತು ರಾಜ್' ಅವರಿಗೆ ಸಿರಿ ಸೌಂದರ್ಯ ಮಾಸ ಪತ್ರಿಕೆ ತಂಡದ ಆರೈಕೆ ಗಳು.


'ಮುತ್ತು ರಾಜ್' ಕಾಮಿಡಿ ಕಿಲಾಡಿಗಳು ಅಡ್ಡದಲ್ಲಿ ತಯಾರಾಗುತ್ತಿರುವ ಕನ್ನಡದ ಜೂನಿಯರ್ 'ಚಿಕ್ಕಣ್ಣ'. ಚಿಕ್ಕೂಸ್ ಎಂದರೆ ತಪ್ಪಾಗಲಾರದು. ಬಾಲ್ಯದಲ್ಲಿ ಈತನು ಬೆಳೆದದ್ದು ಬಡತನದಿಂದ ಎಂಬುವಂತೆ ಕಾಣುತ್ತದೆ. ಆದರೆ ನಟನೆಯಲ್ಲಿ ಮಾತ್ರ ಶ್ರೀಮಂತ. ಕಲಾಸಕ್ತರು ನಟನೆಯ ವೇದಿಕೆಗಾಗಿ ಪಡುವ ಕಷ್ಟ ಅಷ್ಟಿಷ್ಟಲ್ಲ. 

ಇಂತಹ ಕಲಾವಿದರಿಗೆಂದೇ  ಕಾಮಿಡಿ ಕಿಲಾಡಿಗಳು ವೇದಿಕೆ ಸಜ್ಜುಗೊಂಡು ದಾರಿದೀಪವಾಗಿದೆ. ಮುತ್ತುರಾಜ್ ನಮ್ಮ ನಿಮ್ಮೆಲ್ಲರ ಮನಸೆಳೆಯುವ ಕಲಾವಿದನಾಗಲಿ ಎಂದು ಹಾರೈಸುವ ಸಿರಿ ಸೌಂದರ್ಯ ಮಾಸ ಪತ್ರಿಕೆ ತಂಡ...