Sunday, 1 September 2024

ನೀ ಭೂಮಿಯ ಸುತ್ತುವ ಚಂದದ ಚಂದಿರ

 ನೀ ಭೂಮಿಯ ಸುತ್ತುವ ಚಂದದ ಚಂದಿರ 

ಹುಣ್ಣಿಮೆ ಬೆಳಕಲ್ಲಿ ಕಾಣುವೆ ಬಲು ಸುಂದರ ಸುಂದರ

ನಿನ್ನಯ ನೆನಪಲೆ ನೆನೆವೆನನುದಿನ 

ಕಾರಣ ಕಾಣುವ ಹಂಬಲ ಹಂಬಲ

ಸಂಜೆಯ ಹೊತ್ತಲ್ಲೂ ನಿನ್ನದೇ ಗುಂಗಲ್ಲಿ 

ಅಲೆದಲೆದಾಡಿ ಹಗಲನು ಕಳೆದು ಕಡಲಿನ ತೀರದಿ ನಿಂತು ಕೈ ಗಡಿಯಾರವ ನೋಡಲು ಮರೆತೆನು

ಅಲ್ಲಿಯೂ ನಿನ್ನಯ ಸ್ವರಗಳೇ ತೇಲುತ ಮೆರೆದಿರೆ ಮುಳುಗಿಸಿ ಅಲೆಗಳ ಸದ್ದನು


ನೀ ಭೂಮಿಯ ಸುತ್ತುವ ಚಂದದ ಚಂದಿರ 

ಹುಣ್ಣಿಮೆ ಬೆಳಕಲ್ಲಿ ಕಾಣುವೆ ಬಲು ಸುಂದರ ಸುಂದರ

ಮಂಡಿಯನೂರಿ ಕಾಲವ ಕಾದಿಹೆ ನಾನು

ನೀ ಅಂದದ ಚೆಂದದ ಸೀರೆಯನು ಹುಟ್ಟು ಹಿಡಿದು ಕೈಯಲಿ ತಾಂಬೂಲದ ಕಟ್ಟು 

ಒದೆಯುವೆ ಎಂದು ಎನ್ನಯ ಮನೆಯ ಹೊಸಲಿನ ಮೇಲಿನ ಅಕ್ಕಿಯ ಸೇರನು

Monday, 18 March 2024

ಮಣ್ಣ ಕುಡಿಕೆಯಲಿಟ್ಟ ಬೆಣ್ಣೆ

 

ಮಣ್ಣ ಕುಡಿಕೆಯಲಿಟ್ಟ ಬೆಣ್ಣೆಯಂತಹಾ ಹೃದಯವಿದು, ಜೀವಂತ ಸದಾ ಎನ್ನೆದೆಯಲ್ಲೆ, ಕದಿಯಲು ಬಂದ ಕೃಷ್ಣೆಯರಿಗೆ ಸಿಗದೆ, ಸುಡಲು ಬಂದ ಸೂರ್ಯನ ಕಿರಣದಿಂದವಿತು ಹಿಮಾಲಯದ ತಪ್ಪಲು ಪ್ರದೇಶದ ದಾರಿಯ ತಾ ಹುಡುಕುತಲಿರುವಾಗ  ಮುಂಜಾನೆಯ ಎಳೆಬಿಸಿಲಿನಂತ ಕಣ್ಣನೋಟ, ಆಗತಾನೆ ಗೂಡಿನ ಬಾಗಿಲಿನಿಂದ ಹೊರಬಂದ ಹಕ್ಕಿಗಳ ನಾದ ಸ್ವರವ ಮೀರಿಸುವ ಧ್ವನಿಯ ಕೇಳಿ ರಾತ್ರಿ ಇಡೀ ಕಗ್ಗತ್ತಲು ಕವಿದು ಇದ್ದರೂ ಕಾಣದಂತಿದ್ದ 'ಪ್ರಕೃತಿ'ಯ ಚೆಲುವು, ಒಲವು ಗಳಿಗೆ ಮಣಿದು ಕರಗಿದ ಬೆಣ್ಣೆ ನೆಲದ ಪಾಲಾಗಲು ಕಾರಣವಾದದ್ದು ಮನೋರಂಜನೆಯ ಕೋಲಾಟದ ದೊಣ್ಣೆ

ಹೆಚ್. ರಾಜು ಕೋಡಿಹಳ್ಳಿ



Friday, 22 December 2023

ದೊಡ್ಡಬಳ್ಳಾಪುರ ರೈತರು ಭ್ರಷ್ಟ ಮುಕ್ತ ಜೀವನನಡೆಸಲಿ

 ಮಾನ್ಯ ಶಾಸಕರಾದ ದೀರಜ್ ಮುನಿರಾಜು ರವರ ಆಡಳಿತ ಕ್ಪೇತ್ರವಾದ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2023-2024 ನೇ ಸಾಲಿನ ರಾಗಿಬೆಳೆಗಾರರಿಂದ ರಾಗಿ ಖರೀದಿಸಲು ಸರ್ಕಾರ 01/01/2024ರಿಂದ 31/3/2024ರ ವರೆಗೆ ಗಡುವು ನೀಡಿದ್ದು ರೈತರಿಂದ ರಾಗಿಯನ್ನು ಗೋಡನ್ ಗೆ ಸಾಗಿಸುವ ಅಥವ ಒಪ್ಪಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಭ್ರಷ್ಟ ಚಟುವಟಿಕೆಗಳು ನಡೆಸದಿರಲು ಮಾನ್ಯ ಶಾಸಕರಾದ ದೀರಜ್ ಮುನಿರಾಜು ರವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೆನೆ.



ಹಿಂದಿನ ವರ್ಷ ರಾಗಿ ಖರೀದಿ ಅಧಿಕಾರಿಗಳು ನಡೆಸುತ್ತಿದ್ದ ಭ್ರಷ್ಟ ಚಟುವಟಿಕೆಗಳ ವಿವರವನ್ನು  ಈ ಹಿಂದಿನ ಶಾಸಕರ ಗಮನಕ್ಕೆ ತಂದರೂ ಸೂಕ್ತ ಕ್ರಮವಹಿಸಿ ರೈತರಿಗೆ ನ್ಯಾಯ ಕೊಡುವಲ್ಲಿ ವಿಫಲವಾಗಿದ್ದರು. ಒಂದು ವೇಳೆ ಈ ಬಾರಿಯೂ ಆ ರೀತಿಯ ವಾತಾವರಣ ಕಂಡುಬಂದಲ್ಲಿ ರೈತರ ಹಾಗೂ ನಮ್ಮನಿಮ್ಮೆಲ್ಲರ ನೆಚ್ಚಿನ ನಾಯಕರಾದ ದೀರಜ್ ಮುನಿರಾಜು ಅವರ ಗಮನಕ್ಕೆ ತರುವಂತೆ ದೊಡ್ಡಬಳ್ಳಾಪುರದ ಎಲ್ಲಾ ರೈತ ಭಾಂದವರಲ್ಲಿ ಮನವಿ ಮಾಡಿಕೊಳ್ಳುತ್ತೆನೆ..

ಹೆಚ್ ರಾಜು ಕೋಡಿಹಳ್ಳಿ.

Tuesday, 8 June 2021

ಓಂ ನಮೋ ಭಗವತೇ ವಾಸುದೇವ










ಹರಿ ನಾರಾಯಣ ನಾರಾಯಣ ಹರಿ
ಹರಿ ನಾರಾಯಣ ನಾರಾಯಣ ಹರಿ
ನಾರಾಯಣ ಹರಿ ನಾರಾಯಣ ಹರಿ
ಆದಿಯು ನಿನ್ನಲೆ ಅಂತ್ಯವು ನಿನ್ನಲೆ
ಸ್ಮರಣೆ ಮಾತ್ರದಿ ಜೀವಾತ್ಮವು ನೆನೆವುದು ಮುಕ್ತಿಯಾ ನೆಲೆ
ಎನ್ನೊಳ ನೀನಿರೆ ನಿನ್ನೆಡೆ ಸೆಳೆದಿರೆ
ಸಾರ್ಥಕ ಜೀವನ ಸ್ವಾರ್ತವ ತೊರೆದಿರೆ

ಹರಿ ನಾರಾಯಣ ನಾರಾಯಣ ಹರಿ
ಹರಿ ನಾರಾಯಣ ನಾರಾಯಣ ಹರಿ
ನಾರಾಯಣ ಹರಿ ನಾರಾಯಣ ಹರಿ
ಸರ್ವಲೋಖ ಸಂಚಾರಿ ನೀ ಅಖಿಲಾಂಡ ಕೋಟಿ ಬ್ರಂಹಾಂಡಕ್ಕಧಿಕಾರಿ
ನೀಲವರ್ಣ ನಿರಾಕಾರಿ
ನೀ ಭವಸಾಗರ ಸೌಂದರ್ಯ ಲಹರಿ
ಕಪಟ ನಾಟಕ ಸೂತ್ರದಾರಿ
ನೀ ಕಮಲೆಯೊಡನೆ ಸಂಸಾರಿ

ಹರಿ ನಾರಾಯಣ ನಾರಾಯಣ ಹರಿ
ಹರಿ ನಾರಾಯಣ ನಾರಾಯಣ ಹರಿ
ನಾರಾಯಣ ಹರಿ ನಾರಾಯಣ ಹರಿ
ದುಷ್ಟರ ಪಾಲಿಗೆ ಶಿಕರಿ
ನೀ ಭಕ್ತರ ಮನದಿ ವಿಹಾರಿ
ಧರ್ಮ ರಕ್ಷಣೆಗವತಾರಿ
ನೀ ಮಾನವ ಕುಲ ಮಾಧರಿ
ಮುಕ್ತಿ ಮಾರ್ಗ ಸಹಕರಿ
ನೀ ಪಾಪ ಪುಣ್ಯದ ಅಧಿಕಾರಿ

ಹರಿ ನಾರಾಯಣ ನಾರಾಯಣ ಹರಿ
ಹರಿ ನಾರಾಯಣ ನಾರಾಯಣ ಹರಿ
ನಾರಾಯಣ ಹರಿ ನಾರಾಯಣ ಹರಿ
ದುರಳರೆ ತುಂಬಿದ ಈ ದರೆಯಲಿ
ಬಲ್ಲವರಾರು ನಿನ್ನಯ ಲೀಲೆ
ಎಲ್ಲವುದರಲು ನೀನಿರೆ ಎಲ್ಲವು ನಿನ್ನಲೆ
ಈ ಕೊಟಿ ಜೀವ ಸೃಷ್ಟಿಯಲಿ

ಹರಿ ನಾರಾಯಣ ನಾರಾಯಣ ಹರಿ
ಹರಿ ನಾರಾಯಣ ನಾರಾಯಣ ಹರಿ
ನಾರಾಯಣ ಹರಿ ನಾರಾಯಣ ಹರಿ





 

Saturday, 21 March 2020

ಮಹಾಮಾರಿಗೂ ಮಹಾದೇವಿಗು ಅದ್ಭುತ ಸಂಬಂಧದ ಬೆಸುಗೆ ಹೆಣೆದವರು ಭಾರತೀಯರು...


ಒಂದು ಕಾಲದಲ್ಲಿ ಯಾವುದಾದರು ಪ್ರಾಂತ್ಯದಲ್ಲಿ ಈ ರೀತಿ ಕಾಯಿಲೆಗಳು ಬಂದರೆ ಅಲ್ಲಿನ ಜನ ಅದನ್ನು ಮಹಾ ಮಾರಿಯಮ್ಮ ಎಂದು ಆ ಕಾಯಿಲೆಗೆ ಹಿಟ್ಟ ಹೆಸರಿನಲ್ಲೇ ಒಂದು ದೇವಿಯ ಗುಡಿ ಕಟ್ಟಿ ಪೂಜಿಸುತ್ತಿದ್ದರು. ಉದಾ:- ಪ್ಲೇಗ್ ದೇಶವನ್ನು ಆವರಿಸಿದ  ಕಾಲದಲ್ಲಿ ಪಳಾಕಮ್ಮ ಎಂದು ಹೆಸರಿಟ್ಟು ಊರಿನ ಹೊರಗಡೆ ಗುಡಿ ಕಟ್ಟಿ ಪೂಜಿಸಿ ಅಲ್ಲಿ ಎಲ್ಲಾ ಮನೆಯವರು ಭಕ್ಷ್ಯ ಭೋಜನ ವನ್ನು ಸಲ್ಲಿಸುತ್ತಿದ್ದದ್ದು ವಾಡಿಕೆಯಾಗಿತ್ತು. ಇದಕ್ಕೆ ಕಾರಣ ಕಾಯಿಲೆ ಊರಿನ ಹೋಳಗೆ ಬರಬಾರದೆಂದು ಅಂದರೆ ಪ್ಲೇಗ್ ರೋಗವು ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದ ಮೂಲಕ ಹರಡುತ್ತಿತ್ತು, ಈ ಬ್ಯಾಕ್ಟೀರಿಯಾವು ಮೊದಲಿಗೆ ಕೀಟ ಅಥವಾ ಕ್ರಿಮಿಕೀಟಗಳನ್ನು ಸೇರುತ್ತದೆ ನಂತರ ಆ ಕೀಟಗಳನ್ನು ತಿಂದ ಪ್ರಾಣಿಗಳಲ್ಲಿ ನಂತರ ಅದನ್ನು ತಿಂದ ಮಾನವನಲ್ಲಿ ಸೇರುತ್ತಿತ್ತು




  • ದೇಹದ ಹೊರ ಬರುವ ದ್ರವ್ಯಗಳಾದ ರಕ್ತ, ಗೋಣೆ ಮತ್ತು ಎಂಜಲು ಆರೋಗ್ಯ ವ್ಯಕ್ತಿಯ ಚರ್ಮವನ್ನು ಸಂಪರ್ಕಿಸಿದ್ದಾಗ ರೋಗ ಹರಡುವ ಸಾಧ್ಯತೆಗಳಿವೆ.
  • ನೇರ ಶಾರೀರಕ ಸಂಬಂಧದಿಂದ ಸೋಂಕಿತ ವ್ಯಕ್ತಿಯು ಸ್ಪರ್ಶಿಸುವುದರಿಂದ ಮತ್ತು ಲೈಂಗಿಕ ಸಂಪರ್ಕದಿಂದ ರೋಗ ಹರಡುತ್ತದೆ.
  • ಗಾಳಿಯಿಂದ ಹರಡುತ್ತದೆ. ರೋಗ ಉಂಟು ಮಾಡುವ ಸೂಕ್ಷ್ಮಜೀವಿಗಳು ರೋಗಿಯ ದೇಹದಿಂದ ಹೊರ ಬಂದು ಗಾಳಿಯಲ್ಲಿ ಸೇರಿಕೊಂಡು ಗಾಳಿಯನ್ನು ಕಲುಷಿತಗೊಳಿಸುತ್ತದೆ. ಆನಂತರ ಅವು ಉಸಿರಾಟದ ಮೂಲಕ ಆರೋಗ್ಯ ವ್ಯಕ್ತಿಯ ದೇಹವನ್ನು ಹೊಕ್ಕಿ ರೋಗವನ್ನು ಉಂಟು ಮಾಡುತ್ತದೆ.
  • ರೋಗ ಬರಿತ ಕ್ರಿಮಿ-ಕೀಟಗಳು ಕಚ್ಚುವುದರಿಂದ ರೋಗ ಹರಡುತ್ತದೆ. ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಾಗಿದೆ.



ಈ ಎಲ್ಲಾ ಸಮಸ್ಯೆಗಳನ್ನು ದೂರಮಡಲೆಂದೇ ಊರಿನ ಅಥವಾ ಬೇರೇ ಕಡೆಯಿಂದ ಬಂದ ಜನರಿಗೆ ಈ ಕಾಯಿಲೆ ಇದ್ದಲ್ಲಿ ಊರಿನ ಹೊರಗಿನ ದೇವಸ್ಥಾನದಲ್ಲೇ ತಂಗಿರುವ ವ್ಯವಸ್ಥೆಯಾಗುತ್ತಿತ್ತು.
ಈ ಒಂದು ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಲೆಂದು ದೇವರು ಭಕ್ತಿ ಎಂಬ ಗಟ್ಟಿ ನಂಬಿಕೆಯನ್ನು ಬೇಳೆಸುತ್ತದ್ದರು.



ಇಷ್ಟಕ್ಕೂ ಕೊರಾನ ಇಂದಾದ ಒಳಿತುಗಳ ಬಗ್ಗೆ ಏನಾದ್ರು ಗೊತ್ತಿದೆಯಾ ನಿಮಗೆ

  1. ಮಕ್ಕಳನ್ನು ಪಾಸ್ಮಾಡಿಸಿತು
  2. ಟ್ರಾಪಿಕ್ ಸಮಸ್ಯೆ ಬಗೆಹರಿಸಿತು.
  3. ಜನರಿಗೆ ಶುಚಿತ್ವ ಕಲಿಸಿತು.
  4. ಸರ್ಕಾರ ಕೆಲಸಮಾಡುವಂತೆ ಮಾಡಿತು.
  5. ಹಾಯ್ ಅನ್ನುತ್ತಿದ್ದ ಜನ ಈಗ ಚೆನ್ನಾಗಿದ್ದೀರ, ನಿಮ್ಮ ಮನೆಯವರು ಚೆನ್ನಾಗಿದ್ದಾರ, ನಿಮ್ಮ ತಂದೆ ತಾಯಿ ಚೆನ್ನಾಗಿದ್ದಾರ, ನಿಮ್ಮ ತಾತ ಅಜ್ಜಿ ಚೆನ್ನಾಗಿದ್ದಾರ ಅಂತಿದ್ದಾರೆ.
  6. ಎಲ್ಲಾ ಜಾತಿ ಧರ್ಮ ಮರೆಸಿ ಇಡೀ ಪ್ರಪಂಚವೆ ಒಟ್ಟುಗೂಡುವಂತೆ ಮಾಡಿತು.  ಗಂಡ ಹೆಂಡತಿ ಮಕ್ಕಳು ಕುಟುಂಬದವರೊಂದಿಗೆ ಮನೆಯಲ್ಲೆಕೂತು ಕೆಲಸ ಮಾಡುವಂತೆ ಮಾಡಿತು
  7. ಪ್ರಾಣಿ ಹತ್ಯೆ ಕಡಿಮೆ ಮಾಡಿತು.
  8. ಭಾರತ ತ್ಯಜಿಸಿದ್ದವರೆಲ್ಲ ಇಂದು ಮರಳುವಂತೆ ಮಾಡಿತು.
  9. ಸಿಕ್ಕ ಸಿಕ್ಕವರಲ್ಲಿ ಕೈ ಕುಲುಕಿ ಅಪ್ಪಿ ಮುದ್ದಾಡುವುದನ್ನು ತಪ್ಪಿಸಿತು.
  10. ಮಾಂಸಾಹಾರ ತಿನ್ನುವವರಿಗೊಂದು ಬ್ರೇಕ್ ನೀಡಿತು.
  11. ಪಬ್, ಬಾರ್, ರೆಸ್ಟೊರೆಂಟ್, ಮಾಲ್, ಥಿಯೇಟರ್, etc... ದುಂದುವ್ಯಚ್ಚಕೋರರನ್ನು ಮಟ್ಟಾ ಆಕಿತು.
  12. ನಮ್ಮ ಚಿಕ್ಕಪ್ಪನ ಮಗಳ ಗಂಡನ ಅಣ್ಣನ ಮಕ್ಕಳು ವಿದೇಶದಲ್ಲಿ ಇರುವರು ಎಂದು ಬೊಗಳೆ ಮಾತುಗಳನ್ನಾಡುತ್ತಿದ್ದ ಜನರ ಬಾಯಿಗೆ ಬೀಗ ಹಾಕಿತು.
  13. ಒಂದೇ ತಿಂಗಳಲ್ಲಿ ಶೇ ೩೦% ಜಾಗತೀಕ ಮಾಲಿನ್ಯ ಕಡಿತಗೊಂಡಿದೆ.
  14. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿತವಾಗಿದೆ.
  15. ಯುದ್ದ ಭೀತಿ ದೂರಮಾಡಿದೆ. ಪದೇ ಪದೆ ಕಾಲು ಕರೆದು ಜಗಳ ಮಾಡಿಕೊಂಡು ಬರುತ್ತಿದ್ದ ದೇಶಗಳು ತೆಪ್ಪಗಾಗಿವೆ.
ಹೀಗೆ ಹೇಳುತ್ತಾ ಕುಳಿತರೆ ಮಾತೇ ಮುಗಿಯದು ದೇವಿ ಕರೋನಳ ಮಹಿಮೆ ವರ್ಣಿಸಲು...

ಸಂಕಷ್ಟದಲ್ಲಿ ಇಟಲಿ! ಘೋಷಿಸಿತು ಶರಣಾಗತಿ...



ಅಲ್ಲಿನ ಪ್ರದಾನ ಮಂತ್ರಿ ಹೇಳುತ್ತಾರೆ; ನಮ್ಮ ನಿಯಂತ್ರಣ ಕೈ ತಪ್ಪಿ ಹೋಗಿದೆ. ಸಾಂಕ್ರಮಿಕ ರೋಗ ನಮ್ಮನ್ನು ಕೊಲ್ಲುತ್ತಿದೆ. ಭೂಮಿಯ ಮೇಲೆ ಮಾಡಲು  ಸಾದ್ಯವಾವಿರುವ ಎಲ್ಲಾ ಪರಿಹಾರ ಮಾರ್ಗ ಕೊನೆ ಗೊಂಡಿದೆ. ಇನ್ನು ಆಕಾಶದತ್ತ ನಮ್ಮ ನೋಟ..


ಇಟಲಿ 
ಮೊನ್ನೆ 475
ನಿನ್ನೆ  427
ಇವತ್ತು 627

ಮೂರು ದಿನಗಳಲ್ಲಿ 1529  ಸಾವುಗಳು. ಇವತ್ತೇ ಒಂದು ದಿನ 5,986 ಹೊಸ ಪ್ರಕರಣಗಳು ! ಇಟಲಿ ಸಂಪೂರ್ಣ ವಿಫಲವಾಗಿದೆ.
ABC News Here are the coronavirus symptoms to watch out for amid outbreak ...

ಭಾರತದಲ್ಲಿ ಕೂಡ 250 ರಷ್ಟು ಪ್ರಕರಣಗಳು ದೃಢಪಟ್ಟಿವೆ.   ಜಾಗ್ರತೆ ಒಂದೇ ಪರಿಹಾರ. ಆದಷ್ಟು ಮನೆಯಲ್ಲಿಯೇ ಇರಿ.
ಅಷ್ಟೊಂದು ಅವಶ್ಯಕತೆ ಇಲ್ಲದೆ ಮನೆಯಿಂದ ಹೊರ ಬರಬೇಡಿ.

#ಜನತಾಕರ್ಪ್ಯೂ ಒಂದು ದಿನ ಮಾತ್ರ ಅಲ್ಲ.. ಸಾಧ್ಯವಿದ್ದಷ್ಟು ದಿನಗಳಲ್ಲಿ ಮಾಡಿ.. ರಾಜಕೀಯ ಬದಿಗಿಡಿ.. ತಮಾಷೆ ಟ್ರೋಲ್ ಎಲ್ಲಾ ಬಿಟ್ಟು ಮುಂದೆ ಬರಬಹುದಾದ ಕಠಿಣ ಪರಿಸ್ಥಿತಿಗೆ ತಯಾರಾಗುವ.. ರೋಗ ಹರಡುವುದನ್ನು ತಡಯುವುದೇ  ಆದ್ಯತೆ ಆಗಲಿ... ಸಾಧ್ಯವಾದಷ್ಟು ಪ್ರಚಾರ ಮಾಡುವ.


 ನಾವಂತು ಮುನ್ನೆಚ್ಚರಿಕೆ ವಹಿಸಿದ್ದಾಗಿದೆ ಇನ್ನು ನೀವು...


🗣👤.ದೂರನಿಂತು ಮಾತಾಡಿ ✅ 
🗣👤.ಆಗಾಗ್ಗೆ ಕೈ ತೊಳೆಯಿರಿ ✅ 
🗣👤.ನಿಮ್ಮ ಕೈಯನ್ನು ಮುಖದ ಬಳಿ ಇರುವುದನ್ನು ಸಾಧ್ಯವಾದಷ್ಟು ನಿಯಂತ್ರಿಸಿ ✅ 
🗣👤.ಕೆಮ್ಮು ಮತ್ತು ನೆಗಡಿ ಯಾದ ಸಮಯದಲ್ಲಿ ಕರವಸ್ತ್ರಗಳನ್ನು ಬಳಸಿ ✅ 
🗣👤.ಮಾಸ್ಕ್ ಅಥವಾ ಕರವಸ್ತ್ರದಿಂದ ಮೂಗು ಹಾಗೂ ನಾಯಿಗಳನ್ನು ಮುಚ್ಚಿ ✅ 
🗣👤.ಸಾಧ್ಯವಾದಷ್ಟು ಮನೆಯಲ್ಲೇ ಕಾಲ ಕಳೆಯಿರಿ ✅ 

Thursday, 11 October 2018

ಪ್ರೇಮ, ಮೋಹ, ಕಾಮವೇನಿಲ್ಲ ಆದರೂ ತೀರಾ ಹಿಡಿಸಿದ ಸುಂದರ ಸ್ವಪ್ನ.


ಸುಂದರ ಕನ್ಯೆಯ ಕಂಡು ನಾನಿಂದು ಮೈ ಮರೆತೆ, ದಿಟ್ಟಿಸಿ ನೋಡುತ್ತಾ ಆ ಗಿಳಿ ಮೂಗು ಸುಂದರಿಯ ಕೇಶ ಕ್ಕೆ ಸೋತು, ನಕ್ಷತ್ರವ ಕಂಡು ಆನಂದಿಸುವುದ ಕಲಿಸಿದ ಮಿನುಗುತಾರೆಯಂತಹಾ ಕಂಗಳು, ಪದೇ ಪದೇ ಒಂದಾಗಿ ದೂರಾಗುವಾ ದುಂಬಿ ಹೂಗಳಂತಹಾ ತುಟಿಗಳ ಮಧ್ಯೆ ಮಿಂಚರಿಸಿದ ಬಿಳಿಮೋಡದಂತೆ, ಮೈಸೂರು ಅರಮನೆಯ ಸುತ್ತಣ ಅಲಂಕೃತ ಬಿಳಿಗೋಡೆಯಂತಾ ಹಲ್ಲಗಳು, ವಿಶಾಲ ಮೈದಾನವಾದ ಅಣೆ, ಜಂಬೂ ಸವಾರಿಯಂತಾ ಮೂಗುತಿ, ಸೇಬಿಗಿಂತಾ ಸುಂದರ ಕೆನ್ನೆ. ಅಂತರಾಳದಿ ನೋಡಿದರೆ ಈ ಜನ್ಮಕ್ಕೆ ಇದೇ ಮೊದಲು ಅಷ್ಟು ವಿಶೇತೆ ಕಂಡದ್ದು ತಾರುಣ್ಯದ ಯುವತಿಯೊಬ್ಬಳ ಮುಗಲ್ಲಿ. ಎನ್ನ ಮನಸ್ಸು ಕೋಡ ಇದೇ ಮೊದಲು ಸೋತು ಕಂಗಳ ಸಂಪೂರ್ಣ ಹಿಡಿತವ ಅವಳ ಮುಕಡೆಗೆ ಕೇಂದ್ರೀಕೃತ ಗೊಳಿಸಿದ್ದು. ಹಂತರ ಎರೆಡು ಮೀಟರ್ ಇದ್ದರೂ ಮಗ್ಗುಲಲ್ಲೇ ಇದ್ದಂತೆ ಭಾಸವಾದ ದೇವತೆ. ತಿಳಿಯದೇ ಬಸ್ ಇಳಿದು ಕಾಣೆಯಾದಳು. ಪೀಣ್ಯ ಒಂದನೇ ಹಂತದಿಂದ ಸ್ವಲ್ಪ ಹಿಂದೆ, ನಮ್ಮಿಬ್ಬರನ್ನೇ ಗ್ರಹ ಗ್ರಹಿಸಿ ನೋಡುತ್ತಿದ್ದವರ ಕಂಡು ಮುಜುಗರದಿ ನಾ ತಲೆಯನಿಟ್ಟಾಗ ಕಿಟಕಿಯಕಡೆಗೆ. ಕಣ್ಣು ಮುಚ್ಚಿದರೂ ಆಕೆಯದೇ ಬಿಂಬ ನಾನಾಗಬಾರದಿತ್ತೇ ಅವಳೊರಗಿದ್ದ ಕಂಬ.
ಆ ನಿನ್ನ ಕೈಗಡಿಯಾರ ಚೆಂದವಿದ್ದರೇನಂತೆ ಚಲುವೇ ಅದರೊಳಗಣ ಸಮಯವೂ ಸರಿಯಿದ್ದು ಮತ್ತೊಮ್ಮೆ ನೀ ನನ್ನ ಕಣ್ಮುಂದೆ ಬಂದರೆ ಹೇಳಿಯೇ ತೀರುವೆ ನೀನೆಂದರೆ ನನಗೆ ಪ್ರೇಮ, ಮೋಹ, ಕಾಮವೇನಿಲ್ಲ ಆದರೂ ತೀರಾ ಹಿಡಿಸಿದ ಸುಂದರ ಸ್ವಪ್ನ ಎಂದು...

*ಹೆಚ್. ರಾಜು ಕೋಡಿಹಳ್ಳಿ.*